ಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆ
ಈ ಯೋಜನೆಯ ಪರಿಚಯ
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷ ಪ್ರೋತ್ಸಾಹ ಯೋಜನೆಯನ್ನು. ಭಾರತದಲ್ಲಿ ಜನಪ್ರಿಯವಾಗಿ ಪಿಎಂ ಯುಎಸ್‌ಪಿ (pm. usp) ಯೋಜನೆಯಿಂದ ಕರಿಯಲ್ಪಡುವ ಈ ಯೋಜನೆ ಭಾರತ ದೇಶದ ಉನ್ನತ ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರಣೆ ಅಥವಾ ಪ್ರೋತ್ಸಾಹ ನೀಡುವ ಪ್ರಮುಖ ಯೋಜನೆಯಾಗಿದೆ ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಯೋಜನೆ (pm. Usp) ಯ ಉದ್ದೇಶ ಈ ಯೋಜನೆ ಭಾರತ ಸರ್ಕಾರದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯ ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿ ವಾಗಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಯೋಜನೆಯೇ. ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆ ಆಗಿದೆ.
ನಿಮಗೆ ಆರ್ಟಿಕಲ್ ಓದಲು ಸಮಯ ಇಲ್ಲದೇ ಇದ್ದಲ್ಲಿ ನಿಮಗಾಗಿ ಮೂರು ನಿಮಿಷದ ವಿಡಿಯೋ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಒಮ್ಮೆ ಚೆಕ್ ಮಾಡಿಕೊಳ್ಳಿ
ಹಾಗಾದರೆ ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಪ್ರೋತ್ಸಾಹ ಯೋಜನೆಗೆ ಅರ್ಹತೆಗಳೇನು ಹಾಗೂ ಅವಶ್ಯಕತೆಗಳೇನು
2023- 24ನೇ ಸಾಲಿನಲ್ಲಿ ಸೆಕೆಂಡ್ ಪಿಯುಸಿಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು. ಈ ಪಿಎಂ ಯು ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 2024-25 ನೇ ಸಾಲಿನಲ್ಲಿ ಅಭ್ಯರ್ಥಿಗಳು ಮೊದಲನೆಯ ಪ್ರಯತ್ನದಲ್ಲಿ ದ್ವಿತೀಯ ಪಿಯುಸಿಯಲ್ಲಿ ಪಾಸಾಗಿ ಜೊತೆಗೆ 80% ಅಂಕಗಳನ್ನು ಪಡೆದಿರಬೇಕು ಹಾಗೂ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಆ ವಿದ್ಯಾರ್ಥಿಯು ಶಿಕ್ಷಣವನ್ನು ಮುಂದುವರಿಸು ಅವರಾಗಿರಬೇಕು ಅಂತಹ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಉಚ್ಚತ ಶಿಕ್ಷೆ ಪ್ರೋತ್ಸಾಹ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
ಸೆಕೆಂಡ್ ಪಿಯುಸಿಯಲ್ಲಿ ಅಭ್ಯರ್ಥಿಗಳು 80ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದು ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ.
ಮೊದಲನೆಯದಾಗಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ www. scholarship. gov. in ವೆಬ್ಸೈಟ್ ಗೆ ಹೋಗಿ ನ್ಯಾಷನಲ್ ಇ- ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕು.
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಅಕ್ಟೋಬರ್ 31 2024
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಯೋಜನೆಯ ವೇತನದ ಪ್ರಮಾಣ
ಈ ಯೋಜನೆಗೆ ಅರ್ಹರಾದ ಅಭ್ಯರ್ಥಿಗಳಿಗೆ ಮೊದಲ ಮೂರು ವರ್ಷಗಳಿಗೆ. ಪ್ರತಿ ವರ್ಷವೂ 12000 ಸಿಗಲಿದೆ.
ನಂತರದಲ್ಲಿ ಕೊನೆಯ ಎರಡು ವರ್ಷಗಳಿಗೆ ಪ್ರತಿ ವರ್ಷವೂ 20,000 ಸಿಗಲಿದೆ.
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆಗೆ ಅರ್ಹರಾದ ಅಭ್ಯರ್ಥಿಗಳಿಗೆ ಐದು ವರ್ಷಗಳಿಗೆ ಒಟ್ಟು 76,000 ವಿದ್ಯಾರ್ಥಿ ವೇತನವು ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವಲ್ಲಿ ಸಹಾಯ ಮಾಡುತ್ತದೆ
ಉದಾಹರಣೆಗೆ
ಮಹೇಶ್ ಎಂಬ ವಿದ್ಯಾರ್ಥಿ 2022-23 ನೇ ಸಾಲಿನಲ್ಲಿ ಸೆಕೆಂಡ್ ಪಿಯುಸಿಯಲ್ಲಿ ಮಹೇಶ್ 82 ಅಂಕಗಳನ್ನು ಪಡೆದು. ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುತ್ತಾನೆ. 2023 24ನೇ ಸಾಲಿನಲ್ಲಿ ಮಹೇಶ್ ಪ್ರಥಮ ವರ್ಷದ ಇಂಜಿನಿಯರಿಂಗ್ ಪಠ್ಯಕ್ರಮಕ್ಕೆ ಸೇರ್ಪಡೆಯಾಗುತ್ತಾನೆ. ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆ ಅಡಿ ಮೊದಲ ವರ್ಷದ 12 ಸಾವಿರ ವಿದ್ಯಾರ್ಥಿ ವೇತವು ಮಹೇಶ್ ನ ಶೈಕ್ಷಣಿಕ ವೆಚ್ಚವನ್ನು ಪಡಿಸುವಲ್ಲಿ ಸಹಾಯ ಆಗುತ್ತದೆ
ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪಡೆದು.ಈ ವರ್ಷದ ವಿದ್ಯಾರ್ಥಿ ವೇತನವನ್ನು ಪಡೆಯುವುದಕ್ಕೆ. ವಿದ್ಯಾರ್ಥಿ ಗಳು ಮತ್ತೆ ಪ್ರಧಾನಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಈ ಹಿಂದಿನ ವರ್ಷದಲ್ಲಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಇದೇ ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ನವೀಕರಿಸಲು ಅರ್ಜಿ ಸಲ್ಲಿಸಬೇಕು. ಜೊತೆಗೆ ಈ ಹಿಂದೆ ಪಡೆದ ವಿದ್ಯಾರ್ಥಿ ವೇತನದ ದಾಖಲಾತಿಗಳು ಹಾಗೂ ಪ್ರಸ್ತುತ ಶೈಕ್ಷಣಿಕ ಸಾಧನೆಯನ್ನು ಸಾಬೀತು ಪಡಿಸುವಂತಹ ದಾಖಲಾತಿಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು
ಉದಾಹರಣೆಗೆ
ಮಹೇಶ್ ಎಂಬ ವಿದ್ಯಾರ್ಥಿ ತನ್ನ ಮೊದಲ ವರ್ಷದ ಇಂಜಿನಿಯರಿಂಗ್ ಪಠ್ಯಕ್ರಮವನ್ನು ಅಚ್ಚುಕಟ್ಟಾಗಿ ಮುಗಿಸಿ. 2024 -25 ನೇ ಸಾಲಿನಲ್ಲಿ ಎರಡನೇ ವರ್ಷಕ್ಕೆ ಕಾಲಿಟ್ಟನು. ಇಂತಹ ಸಮಯದಲ್ಲಿ ಮಹೇಶ್ ವಿದ್ಯಾರ್ಥಿವೇತನವನ್ನು ನವೀಕರಿಸಲು ಅಗತ್ಯ ದಾಖಲಾತಿಗಳನ್ನು ನ್ಯಾಷನಲ್ ಇ -ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುತ್ತಾನೆ
ಹಾಗೆ ಇವನು ಪ್ರತಿ ವರ್ಷವೂ ಹೀಗೆ ಮುಂದುವರಿಸುತ್ತಾ ಹೋಗುತ್ತಾನೆ
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವ ವಿವರ
ಯೋಜನೆಗೆ ಅರ್ಹರಾದ ವಿದ್ಯಾರ್ಥಿಗಳು. ಆನ್ಲೈನ್ ನಲ್ಲಿ www. Scholarship. gov.in ವೆಬ್ಸೈಟ್ಗೆ ಹೋಗಿ ನ್ಯಾಷನಲ್ ಇ -ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಹೊಸದಾಗಿ ಖಾತೆಯನ್ನು ತೆರೆಯಿರಿ ಮತ್ತು ನೋಂದಣಿ ಮಾಡಿಕೊಳ್ಳಿ.
ಅರ್ಜಿ ಸಲ್ಲಿಸುವಿಕೆ : ಪೋರ್ಟಲ್ ನಲ್ಲಿ ಲಾಗಿನ್ ಆಗಿ ಕೇಳಿದ ಅವಶ್ಯ ಮಾಹಿತಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜುನ್ ಸಲ್ಲಿಸಿದ ನಂತರ ಅರ್ಜಿಯ ಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ
ಅರ್ಜಿಯನ್ನು ಶ್ರದ್ಧೆಯಿಂದ ಭರ್ತಿ ಮಾಡಿ ಕೇಳಿದ ಎಲ್ಲ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ ಮತ್ತು ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಜೊತೆಗೆ ಅಪ್ಲೋಡ್ ಮಾಡುವಾಗ ಎಚ್ಚರಿಕೆಯಿಂದ ಇರಲು ಪ್ರಯತ್ನಿಸಿ.
ಪ್ರಧಾನ ಮಂತ್ರಿ ಉಸ್ತುತರ್ ಶಿಕ್ಷಾ ಯೋಜನೆಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು 080-23311330
ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಯೋಜನೆಯು ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ. ಅತ್ಯಂತ ಅರ್ಥಪೂರ್ಣವಾಗಿರುವಂತಹ ಅವಕಾಶಗಳನ್ನು ಒದಗಿಸುವ ಮೂಲಕ ಭಾರತ ದೇಶದ ಉನ್ನತ ಶೈಕ್ಷಣಿಕ ಕ್ಷೇತ್ರವನ್ನು ಮುನ್ನಡೆಸಲು ಸಹಕಾರಿಯಾಗುವಂತಹ ಯೋಜನೆ ಇದಾಗಿದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ತಮ್ಮ ಶೈಕ್ಷಣಿಕ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು
ನಿಮಗೆ ಆರ್ಟಿಕಲ್ ಓದಲು ಸಮಯ ಇಲ್ಲದೇ ಇದ್ದಲ್ಲಿ ನಿಮಗಾಗಿ ಮೂರು ನಿಮಿಷದ ವಿಡಿಯೋ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಒಮ್ಮೆ ಚೆಕ್ ಮಾಡಿಕೊಳ್ಳಿ