ಭಾರತೀಯ ಸ್ಟೇಟ್ ಬ್ಯಾಂಕ್ (SBI) 2024-25 ನೇ ಸಾಲಿನಲ್ಲಿ ಒಟ್ಟು 12000 ಹುದ್ದೆಗಳು

12000 ಹೊಸ ಉದ್ಯೋಗಗಳು ನೇಮಕ

ಸರ್ಕಾರಿ ಸೌಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024-2025 ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ ಸುಮಾರು 12000 ಉದ್ಯೋಗಗಳ ನೇಮಕಕ್ಕೆ ಮುಂದಾಗಿದೆ ಈ ಪೈಕಿ ಈ ಹುದ್ದೆಗಳಲ್ಲಿ ಶೇಕಡ 85ರಷ್ಟು ಇಂಜಿನಿಯರಿಂಗ್ ಪದವಿದರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ

ಯಾವೆಲ್ಲ ಹುದ್ದೆಗಳಿವೆ

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2024- 2025 ನೇ ಸಾಲಿನಲ್ಲಿ
Probationary officers (PO) 3000+
Assistant 8000+ ಒಟ್ಟಾರೆ ಹುದ್ದೆಗಳು 12000 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಈ ಹುದ್ದೆಗಳಲ್ಲಿ ವಿಶೇಷವಾಗಿ 85% ಇಂಜಿನಿಯರಿಂಗ್ ಪದವಿದರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ ಬ್ಯಾಂಕ್ ನ ಅಧ್ಯಕ್ಷ ದಿನೇಶ್ ಕುಮಾರ್ ಕಾರ ತಿಳಿಸಿದ್ದಾರೆ

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಯಾಕೆ ಆದ್ಯತೆ

ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ನೀಡುವ ಹುದ್ದೆಗಳ ಶ್ರೇಣಿಯಲ್ಲಿ ಯಾವುದೇ ಪಕ್ಷಪಾತ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ .ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಇಂಜಿನಿಯರ್ ಗಳಿಗೆ ಹುದ್ದೆಯ ಬಗ್ಗೆ ಪರಿಚಯಿಸುವ ಜೊತೆಗೆ ಅವರ ಸಾಮರ್ಥ್ಯದ ಆಧಾರದ ಮೇಲೆ ಬ್ಯಾಂಕ್ ವ್ಯವಹಾರ ಹಾಗೂ ಮಾಹಿತಿ ತಂತ್ರಜ್ಞಾನ ಕೆಲಸಕ್ಕೂ ನಿಯೋಜಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇದು ಬ್ಯಾಂಕಿನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಬಲ ವರ್ಧನೆಗೂ ಸಹಕಾರಿ ಯಾಗಲಿದೆ ಎಂದು PTI ಸುದ್ದಿ ಸಂಸ್ಥೆಯಲ್ಲಿ ತಿಳಿಸಿದ್ದಾರೆ .

ದೇಶದಲ್ಲಿ ಪ್ರತಿವರ್ಷ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರ ಬರುತ್ತಿರುವ ಪದವೀಧರ ಸಂಖ್ಯೆ ಹೆಚ್ಚುತ್ತಿದೆ.ಆದರೆ ಅದಕ್ಕೆ ಸೂಕ್ತವಾದ ಐಟಿ ವಲಯದಲ್ಲಿ ಹೊಸದಾಗಿ ನೇಮಕಾಂತಿ ನಡೆಯುತ್ತಿಲ್ಲ.ಇಂತಹ ಸಂದರ್ಭದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಈ ಪದವೀಧರರ ಪಾಲಿಗೆ ವರದಾನ ಆಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಮಹತ್ವ ಕುರಿತು ನಿಯಮಿತವಾಗಿ ಬ್ಯಾಂಕ್ ಗಳಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ದಿನೇಶ್ ಕುಮಾರ್ ಕಾರ ತಿಳಿಸಿದ್ದಾರೆ