ನೀವು ಒಬ್ಬ ಮಹಿಳೆಯಾಗಿ ನಿಮಗೆ ಮೀಸಲಾಗಿರುವ ಹಕ್ಕುಗಳ ಬಗ್ಗೆ ನಿಮಗೆ ತಿಳಿದಿದೆಯೇ?ಅಥವಾ ನಿಮ್ಮ ಸ್ನೇಹಿತರು. ಸಹೋದರಿಯರು ಅಥವಾ ನಿಮ್ಮ ತಾಯಂದಿರು ಅವರ ಹಕ್ಕುಗಳು ಕಳೆದುಕೊಳ್ಳುತ್ತಿದ್ದಾರೆಯೇ?ಭಾರತದ ಕಾನೂನು ಮಹಿಳೆಯರ ಹಕ್ಕುಗಳನ್ನು ಕಾಪಾಡಲು ಏನೇನು ಒದಗಿಸಿದೆ? ನಿಮ್ಮ ಹಕ್ಕುಗಳಿಗೆ ಅನ್ಯಾಯವಾಗುತ್ತಿದ್ದರೆ ಎಲ್ಲಿ ಮತ್ತು ಹೇಗೆ ದೂರು ನೀಡಬಹುದು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ
ಭಾರತದಲ್ಲಿ ಮಹಿಳಾ ಹಕ್ಕುಗಳ ಇತಿಹಾಸ

ಮಹಿಳೆಯರ ರಕ್ಷಣೆ ಮತ್ತು ಹಕ್ಕಿಗಾಗಿ ರಾಜಾರಾಮ್ ಮೋಹನ್ ರಾಯ್ ಅವರ ಪಾತ್ರ
ಸತಿ ಪದ್ಧತಿ ಅನ್ವಯ ವಿಧವೆಯರನ್ನು ಗಂಡಂದಿರ ಅಗ್ನಿಚಿತೆಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಸುಡುತಿದ್ದ ಸತಿ ಪದ್ಧತಿಯನ್ನು ರದ್ದು ಮಾಡಲು ಹೋರಾಡಿ ವಿಧವಾ ಮಹಿಳೆಯರಿಗೆ ಮರು ಮದುವೆಯಾಗುವ ಹಕ್ಕು ಜೊತೆಗೆ ಮಹಿಳೆಯರಿಗೆ ಆಸ್ತಿ ಹೊಂದುವ ಹಕ್ಕಿಗಾಗಿ ಶ್ರಮಿಸಿದರು
1829 ರಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಕ್ ಇವರಿಂದ ಸತಿ ಪದ್ಧತಿ ಮದುಮೂಲನೆ ಮಾಡಿದರು ಜೊತೆಗೆ ಬಹು ಪತ್ನಿತ್ವ ಪದ್ಧತಿಯನ್ನು ವಿರೋಧಿಸಿದರು
ಮಹಿಳಾ ಸಂಘಟನೆಗಳು ಮತ್ತು ಚಳುವಳಿಗಳು
ಕಸ್ತೂರಿ ಬಾ ಗಾಂಧಿ ಟ್ರಸ್ಟ್
ಕಸ್ತೂರಿ ಬಾ ಗಾಂಧಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಈ ಟ್ರಸ್ಟ್ ಮಹಿಳಾ ಸಬಲೀಕರಣ ಗ್ರಾಮೀಣ ಶಿಕ್ಷಣ ಮತ್ತು ಮಹಿಳರ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಾಗಿತ್ತು
ಮಹಿಳಾ ಸಂಘಟನೆಗಳು ಮತ್ತು ಚಳುವಳಿಗಳು
•ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ:
ಅಖಿಲ ಭಾರತ ಮಹಿಳಾ ಸಭಾ All india women’s conference
ಇದರಲ್ಲಿ ಮಹಿಳೆಯರ ಶಿಕ್ಷಣ ಹಕ್ಕುಗಳು ಮತ್ತು ಸ್ವಾತಂತ್ರ ಹೋರಾಟಕ್ಕಾಗಿ ಒತ್ತು ನೀಡಲಾಗುತ್ತಿತ್ತು
ಮಹಿಳೆಯರ ಹಕ್ಕುಗಳು
•ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ: ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ಅಂದಿನ ಕಾಲದಿಂದಲೂ ಸಂವಿಧಾನಾತ್ಮಕವಾಗಿ ಹಾಗೂ ಖಾನಾತ್ಮಕವಾಗಿ ವಿಶೇಷ ಸ್ಥಾನಮಾನಗಳಿದ್ದು. ಯತ್ರ ನಾರ್ಯಸ್ತೆ ಪೂಜ್ಯತೇ ರಮಂತೆ ದೇವತಾಂ. ಎಂದು ಮಹಿಳೆಯರನ್ನು ದೇವರಿಗೆ ಹಾಗೂ ತಾಯಿಯೇ ಮೊದಲ ಗುರು ಎಂದು ಹೋಲಿಸುವುದು ಕಂಡುಬಂದಿದೆ. ಮಹಿಳೆಯರನ್ನು ಕ್ಷಮಯಾಧರಿತ್ರಿ. ಸಹನಶೀಲತೆ ಉಳ್ಳುವವರು ಎಂದು ಉಲ್ಲೇಖಿಸಿದ್ದರೂ ಸಹ ಮಹಿಳೆ ಸಮಾಜದಲ್ಲಿ ಶೋಷಣೆಗೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ತುಂಬಾ ಶೋಚನೀಯ. ಆದ್ದರಿಂದ ಮಹಿಳೆಯ ಸಬಲೀಕರಣಕ್ಕೆ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ನೈತಿಕವಾಗಿ. ತನ್ನದೇ ಆದ ಹಕ್ಕುಗಳನ್ನು ಹೊಂದಿರಬೇಕೆಂದು ಸಂವಿಧಾನದಲ್ಲಿ ರೂಪಿಸಲಾಗಿದೆ
ಭಾರತೀಯ ಕಾನೂನು
ಕ್ರಿಮಿನಲ್ ಕಾನೂನು (ತಿದ್ದುಪಡಿ )ಕಾಯ್ದೆ 2013
ಜಸ್ಟಿಸ್ ವರ್ಮ ಸಮಿತಿಯು ಮಾಡಿದ ಶಿಫಾರಸುಗಳಿಗೆ ಅನುಗುಣವಾಗಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು.
- ಭಾರತೀಯ ದಂಡ ಸಮಿತಿ 1860
- ಅಪರಾಧ ಪ್ರಕ್ರಿಯೆ 1973
- ಮತ್ತು ಭಾರತೀಯ ಸಾಕ್ಷಾ ಕಾಯಿದೆ 1872
ಕ್ರಿಮಿನಲ್ ಕಾನೂನು ( ತಿದ್ದುಪಡಿ) ಕಾಯಿದೆಯ ಮೂಲಕ ತಿದ್ದುಪಡೆಗಳನ್ನು ಮಾಡಲಾಯಿತು 2013
•ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ ಭಾರತೀಯ ದಂಡ ಸಮಿತಿಗೆ ಆಸಿಡ್ ದಾಳಿ. ಲೈಂಗಿಕ ಕಿರುಕುಳ. ಮಹಿಳೆಯರ ವಸ್ತ್ರ ಪಹರಣ. ಮತ್ತು ಹಿಂಬಾಲಿಸುವಂತಹ ಹೊಸ ಅಪರಾಧಗಳನ್ನು ಸೇರಿಸಲಾಗಿದೆ. ಅತ್ಯಾಚಾರ ಲೈಂಗಿಕ ಕಿರುಕುಳ ಹಿಂಬಾಲಿಸುವುದು ವಯರಿಸಂ. ಆಸಿಡ್ ದಾಳಿ ಪದಗಳಂತಹ ಅಸಭ್ಯ ಸನ್ನೆಗಳು. ಮತ್ತು ಅನುಸೂಚಿತ ಸ್ಪರ್ಶದಂತಹ ಅಪರಾಧಗಳಿಗೆ ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು ಆಸಿಡ್ ದಾಳಿ ಮತ್ತು ಅತ್ಯಾಚಾರದ ಸಂತ್ರಸ್ತರಿಗೆ ತಕ್ಷಣವೇ ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವುದು ಮತ್ತು ಅಂತಹ ಘಟನೆಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ತಿಳಿಸುವುದು ಕಡ್ಡಾಯವಾಗಿದೆ.
ಕೌಟುಂಬಿಕ ದೌರ್ಜನ್ಯ ಕಾಯ್ದೆ
•ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆಗೆ
ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ: 2005 ಕೌಟುಂಬಿಕ ಹಿಂಸಾಚಾರದಿಂದ ರಚಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯು ದೈಹಿಕ ಹಿಂಸೆ ಮಾತ್ರವಲ್ಲದೆ ಭಾವನಾತ್ಮಕ ಅಥವಾ ಮೌಕಿಕ ಹಿಂಸಾಚಾರದ ಇತರ ಸ್ವರೂಪವನ್ನು ಒಳಗೊಂಡಿದೆ ಈ ಕಾನೂನು ಸಹೋದರಿ ಮತ್ತು ತಾಯಂದಿರ ಅಂತಹ ಮನೆಯಲ್ಲಿ ವಾಸಿಸುವ ಮಹಿಳೆಗೂ ವಿಸ್ತರಣೆ ಮಾಡಲಾಗಿದೆ. ಗೃಹ ಹಿಂಸೆ ಎಂದರೆ. ಒಬ್ಬ ವ್ಯಕ್ತಿಯು ನಿಂದನೆ ಅಥವಾ ದೈಹಿಕ. ಲೈಂಗಿಕ . ಮೌಖಿಕ. ಭಾವನಾತ್ಮಕ ಅಥವಾ ಆರ್ಥಿಕ ದುರುಪಯೋಗದಂತಹ ಬೆದರಿಕೆಯನ್ನು ಒಳಗೊಂಡಿರುತ್ತದೆ. ವರದಕ್ಷಿಣೆ ಅಥವಾ ಆಸ್ತಿ ಅಥವಾ ಇನ್ಯಾವುದೋ ಬೆಲೆಬಾಳುವ ವಸ್ತು ಕಾನೂನು ಬೈರ ಬೇಡಿಕೆಗಳಿಗಾಗಿ ಕಿರುಕುಳವನ್ನು ಸಹ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ( ತಡೆಗಟ್ಟುವಿಕೆ ಮತ್ತು ರಕ್ಷಣೆ ಮತ್ತು ಪರಿಹಾರ ) ಕಾಯ್ದೆ 2013
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ವಿರುದ್ಧ ಮಹಿಳೆಯರನ್ನು ರಕ್ಷಿಸಲು 2013ರಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣ. ಸಂಘಟಿತ ಮತ್ತು ಅಸಂಘಟಿತ ವಲಯಗಳು ಸೇರಿದಂತೆ ಯಾವುದೇ ಸಂಸ್ಥೆ. ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೂ ಈ ಕಾಯ್ದೆ ಅನ್ವಯವಾಗುತ್ತದೆ ವಯಸ್ಸು ಅಥವಾ ಉದ್ಯೋಗದ ಸ್ಥಿತಿಯನ್ನು ಲೆಕ್ಕಿಸದೆ ಗೃಹ ಕಾರ್ಮಿಕರು ಸಹ ಈ ಕಾಯ್ದೆಯ ಅಡಿ ಸೇರಿರುತ್ತಾರೆ. ಈ ಕಾಯ್ದೆಯು ಲೈಂಗಿಕ ಕಿರುಕುಳದಿಂದ ಮುಕ್ತವಾದ ವಾತಾವರಣವನ್ನು ಸೃಷ್ಟಿಸುವ. ಜವಾಬ್ದಾರಿಯನ್ನು ಉದ್ಯೋಗದಾತರ ಮೇಲೆ ಇರಿಸುತ್ತದೆ
ವರದಕ್ಷಿಣೆ ನಿಷೇಧ ಕಾಯ್ದೆ 1961
ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ: ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡನ್ನು ಕಾಯ್ದೆಯಿಂದ ನಿಷೇಧಿಸಲಾಗಿದೆ. ಈ ಕಾಯ್ದೆಯು ವರದಕ್ಷಿಣೆಯನ್ನು ಯಾವುದೇ ಆಸ್ತಿ ಅಥವಾ ಮೌಲ್ಯಯುತ ಭದ್ರತೆ ಎಂದು ವ್ಯಾಖ್ಯಾನಿಸಲಾಗಿದೆ ವರದಕ್ಷಿಣೆ ನೀಡುವುದು ಮತ್ತು ತೆಗೆದುಕೊಳ್ಳುವುದು ಪ್ರೋತ್ಸಾಹಿಸುವುದು ಐದು ವರ್ಷಗಳಿಗೆ ಕಡಿಮೆ ಇಲ್ಲದ ಜೈಲು ಶಿಕ್ಷೆ ಮತ್ತು 15000 ಇಂಥ ಕಡಿಮೆ ಇಲ್ಲದ ದಂಡವನ್ನು ವಿಧಿಸಲಾಗುತ್ತದೆ ಗಂಡು- ಹೆಣ್ಣಿನ ಪೋಷಕರು ಅಥವಾ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆ ಕೇಳುವುದು ಆರು ತಿಂಗಳಿಗಿಂತ ಕಡಿಮೆ ಇಲ್ಲದ ಜೈಲು ಶಿಕ್ಷೆ ಜಾಸ್ತಿ ಎಂದರೆ 2 ವರ್ಷ ರವರಿಗೆ ವಿಸ್ತರಿಸಬಹುದು. 10,000 ದಂಡ ವರದಕ್ಷಿಣೆ ನೀಡುವುದು ಮತ್ತು ತೆಗೆದುಕೊಳ್ಳುವುದು ಯಾವುದೇ ಒಪ್ಪಂದವು ಅನೂರ್ಚಿತವಾಗಿದೆ.ಪ್ರಮಾಣ ಪತ್ರದ ರೂಪದಲ್ಲಿ ಉಡುಗೊರೆಗಳ ಪಟ್ಟಿಯನ್ನು ನೋಟಿಸ್ ಮಾಡಬೇಕು . ಆ ನೋಟಿಸ್ ಮೇಲೆ ರಕ್ಷಣಾಧಿಕಾರಿ ಅಥವಾ ವರದಕ್ಷಿಣೆ ನಿಷೇಧ ಅಧಿಕಾರಿಯಿಂದ ಸಹಿ ಪಡೆದಿರಬೇಕು. ಮತ್ತು 2 ಪಕ್ಷಗಳು ಇಟ್ಟುಕೊಳ್ಳಬೇಕು ಎಂದು ಕಾಯ್ದೆ ಸ್ಪಷ್ಟ ಪಡಿಸಿದೆ.
ಬಾಲ್ಯ ವಿವಾಹ ನಿಷೇಧ ಕಾಯಿದೆ 2006
ಇದು 1929ರ ಬಾಲ್ಯ ವಿವಾಹ ತಡೆ ಕಾಯಿದೆ ಬದಲಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಭಾರತದಲ್ಲಿ 1 ನವೆಂಬರ್ 2007 ರಂದು ಜಾರಿಗೆ ಬಂದಿತು. ಇದು ಬಾಲ್ಯವಿವಾಹಗಳನ್ನು ನಿಷೇಧಿಸುತ್ತದೆ ಮತ್ತು ಬಾಲ್ಯವಿವಾಹದ ಬಲಿಪಶುಗಳಿಗೆ ರಕ್ಷಣೆ ಮತ್ತು ಸಹಾಯವನ್ನು ಒದಗಿಸುತ್ತದೆ.ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ: ಇದರಲ್ಲಿ ಹೆಣ್ಣಿನ ವಯಸ್ಸು 15 ರಿಂದ 18ಕ್ಕೆ ಎದುಸಲಾಯಿತು ಗಂಡಿನ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಸಲಾಯಿತು 18 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ವಯಸ್ಕರಾಗಿದ್ದು ಬಾಲ್ಯ ವಿವಾಹವನ್ನು ಒಪ್ಪಂದ ಮಾಡಿಕೊಂಡವರು 2 ವರ್ಷಗಳಿಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದು ಅಥವಾ ದಂಡ ಶಿಕ್ಷೆ ಎರಡನ್ನು ವಿಧಿಸಬಹುದು
ಆಸ್ತಿ ಹಕ್ಕುಗಳು
ಮಹಿಳೆಯ ಆಸ್ತಿಯನ್ನು( ನಗದು ಆಭರಣ ಸ್ಥಿರ ಆಸ್ತಿ ಇತ್ಯಾದಿಯನ್ನು )ಸ್ತ್ರೀಧಾನ್ ಎಂದು ಕರೆಯಲಾಗುತ್ತದೆ ಮಹಿಳೆಯು ತನ್ನ ಸ್ತ್ರೀಧಾ ನ್ ವಿಶೇಷ ಮಾಲೀಕ ಲಾಗಿದ್ದಾಳೆ. ಮತ್ತು ಅವಳು ಆ ಆಸ್ತಿಯ ಮೇಲೆ ಸಂಪೂರ್ಣ ನಿಯಂತ್ರವನ್ನು ಹೊಂದಿದ್ದಾಳೆ.ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ: ಬೇರೆಯವರ ಬಳಿ ಇಟ್ಟರು ( ಉದಾಹರಣೆಗೆ ಆಭರಣಗಳನ್ನು ಕುಟುಂಬದ ಸದಸ್ಯರ ಬಳಿ ಇಡಲಾಗಿದೆ ) ಅದು ಮಹಿಳೆಗೆ ಮಾತ್ರ ಸೇರಿದೆ
ಸ್ತ್ರೀ ಧಾನ್ ಮೇಲೆ ಮಹಿಳೆಯ ಹಕ್ಕು – ನಿಮ್ಮ ಸ್ತ್ರೀ ಧಾನ್ ನಿಮ್ಮ ವಿಶೇಷ ಆಸ್ತಿಯಾಗಿದೆ ಮತ್ತು ಬೇರೆ ಯಾರು ಅದರ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ
ಹಿಂದೂ ಮಹಿಳೆ ಯಾವ ರೀತಿ ಆಸ್ತಿ ಪಡೆಯಬಹುದು –
ಹಿಂದೂ ಮಹಿಳೆಯರು ಎಲ್ಲಾ ರೀತಿಯ ಆಸ್ತಿಯನ್ನು ಅನುವಂಶಿಕವಾಗಿ ಪಡೆಯಬಹುದು.
ಚಲಿಸಬಲ್ಲ ಆಸ್ತಿ ಆಭರಣಗಳು ನಗದುಗಳು. ಗೃಹ ಉಪಯೋಗಿ ವಸ್ತುಗಳು. ಸ್ಥಿರ ಆಸ್ತಿ ಲೈಕ್ ಭೂಮಿ ಅಪಾರ್ಟ್ಮೆಂಟ್ ಇತ್ಯಾದಿ.
ಹಿಂದೂ ಮಹಿಳೆಯರು ಆಸ್ತಿ ಹೇಗೆ ಪಡೆಯುತ್ತಾರೆ? –
1.ವಿಲ್ ಮೂಲಕ
2.. ಹಿಂದೂ ಉತ್ತರ ಅಧಿಕಾರ ಕಾಯ್ದೆಯ ನಿಯಮಗಳ ಪ್ರಕಾರ
3.ವಿವಾಹಿತ ಮಹಿಳೆ ಆಸ್ತಿ ಹೇಗೆ ಪಡೆಯಬಹುದು
4.1. ಒಬ್ಬ ಹೆಂಡತಿಯಾಗಿ ಅವಳು ತನ್ನ ಗಂಡನ ಆಸ್ತಿಯಿಂದ
5.2. ಒಬ್ಬ ಮಗಳಾಗಿ ಅವಳು ತನ್ನ ಪೋಷಕರ ಆಸ್ತಿಯಿಂದ
6.3. ತಾಯಿಯಾಗಿ ತನ್ನ ಮಗನ ಆಸ್ತಿಯಿಂದ ವಿಧವೆಯಾಗಿ ನನ್ನ ಪಿತ್ರಾರ್ಜಿತ ಹಕ್ಕು
ಸೈಬರ್ ಸುರಕ್ಷತೆ ಕೆಲವು ಉದಾಹರಣೆಗಳು
.ನಿಮ್ಮನ್ನು ಆನ್ಲೈನಲ್ಲಿ ಹಿಂಬಾಲಿ ಸುವುದು
2. ನಿಮ್ಮನ್ನು ಸಾಮಾಜಿಕ ಮಾಧ್ಯಮ ಪೋಷಗಳಲ್ಲಿ ಬೆದರಿಕೆ ಅಥವಾ ನೋಯಿಸುವ ಕಾಮೆಂಟ್ಗಳನ್ನು ಮಾಡುವುದು
3. ನಿಮ್ಮನ್ನು ಟೋಲ್ ಮಾಡುವುದು
4. ನಿಮ್ಮ ಪ್ರೊಫೈಲ್‌ಗೆ ಹ್ಯಾಕ್ ಮಾಡುವುದು
5. ನಿಮ್ಮ ಬಗ್ಗೆ ನಕಲಿ ಪ್ರೊಫೈಲ್ ಮಾಡುವುದು
6. ಆನ್ಲೈನ್ ನಲ್ಲಿ ನಿಮ್ಮ ಖಾಸಗಿ ಫೋಟೋಗಳು ಅಥವಾ ವಿಡಿಯೋಗಳನ್ನು ಸೋರಿಕೆ ಮಾಡುವುದು ಅಥವಾ ಬೆದರಿಸುವುದು
7. ಇ-ಮೇಲ್ ವಾಟ್ಸಪ್ ಸಾಮಾಜಿಕ ಮಾಧ್ಯಮ ಇತ್ಯಾದಿ ಮೂಲಕ ನಿಮಗೆ ನೋವುಂಟು ಮಾಡುವ ಅಥವಾ ಬೆದರಿಕೆ ಸಂದೇಶವನ್ನು ಕಳಿಸುವುದು
ಅನೈತಿಕ ಸಂಚಾರ (ತಡೆಗಟ್ಟುವಿಕೆ )ಕಾಯ್ದೆ 1956
ಈ ಶಾಸನವು ವೇಶ್ಯಾವಾಟಿಕೆ. ಲೈಂಗಿಕ ಗುಲಾಮಗಿರಿ. ಅಂಗಗಳ ಕಳ್ಳ ಸಾಗಣಿಕೆ. ಇತ್ಯಾದಿ ಉದ್ದೇಶಗಳಿಗಾಗಿ ಯಾವುದೇ ರೀತಿ ಮಹಿಳೆ ಅಥವಾ ಯಾವುದೇ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಯುತ್ತದೆ. ಇಂತಹ ಕೃತ್ಯವನ್ನು ಕಠಿಣ ಶಿಖರ್ತಾ ಅಪರಾಧವನ್ನಾಗಿ ಮಾಡುತ್ತದೆ.ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ:
ಕರ್ನಾಟಕದಲ್ಲಿ 1091 ಸಹಾಯವಾಣಿ ಸಂಖ್ಯೆಯು ಮಹಿಳಾ ಸಹಾಯವಾಣಿಯಾಗಿದೆ
, ಇದು ದಿನದ 24 ಗಂಟೆಗಳ ಕಾಲ ಲಭ್ಯವಿದೆ
ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ
ಉದ್ಯೋಗ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು. ಮಹಿಳೆಯರ ಆರ್ಥಿಕ ಹಕ್ಕುಗಳನ್ನು ರಕ್ಷಿಸಲು. ಮತ್ತು ಅವರ ತಾಯಿಯ ಕರ್ತವ್ಯವನ್ನು ಬೆಂಬಿಸಲು . ಕೆಲಸದ ಸ್ಥಳಗಳಲ್ಲಿ ಹೆರಿಗೆ ಪ್ರಯೋಜನಗಳು ಅವಶ್ಯಕ; ಮಾತೃತ್ವ ಪ್ರಯೋಜನ ಕಾಯ್ದೆ 1961ರ ಎಲ್ಲ ಮಹಿಳಾ ಉದ್ಯೋಗಗಳಿಗೆ ಮಾತೃತ್ವ ರಜೆಯ ರೂಪದಲ್ಲಿ ಹೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಹೆರಿಗೆ ರಜೆ ಎಂದರೆ? ಗರ್ಭಿಣಿಯರಿಗೆ ನೀಡಲಾಗುವ ವೇತನ ಸಹಿತ ರಜೆ. ಹೆರಿಗೆ ರಜೆ ಎಲ್ಲಾ ಗರ್ಭಿಣಿಯರು ಮೊದಲ ಮತ್ತು ಎರಡನೇ ಮಗುವಿಗೆ 26 ವಾರಗಳ ಹೆರಿಗೆ ರಜೆ ಗೆ ಅರ್ಹರಾಗಿರುತ್ತಾರೆ. 3ನೇ ಮತ್ತು ನಂತರದ ಮಗುವಿಗೆ ತಾಯಂದಿರು 12 ವಾರಗಳ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ. ಗರ್ಭಪಾತ ಅಥವಾ ಗರ್ಭ ವ್ಯವಸ್ಥೆಯ ವೈದ್ಯಕೀಯ ಮುಕ್ತಾಯದ ಸಂದರ್ಭದಲ್ಲಿ. ಮಹಿಳೆ ಆರು ವಾರಗಳ ಹೆರಿಗೆ ರಜೆ ತೆಗೆದುಕೊಳ್ಳಬಹುದು ಭಾರತದ ಮಹಿಳಾ ಹಕ್ಕುಗಳು ಮತ್ತು ಕಾನೂನು ರಕ್ಷಣೆ: