ಮಾಹಿತಿ ಹಕ್ಕು ನಮ್ಮ ನಮ್ಮ ಸರ್ಕಾರದ ಕೆಲವು ಯೋಜನೆಗಳು ಅಥವಾ ಸರ್ಕಾರದ ಕೆಲವು ಇಲಾಖೆಯ ಸಂಬಂಧ ಪಟ್ಟ ಮಾಹಿತಿಯನ್ನು ಅಚ್ಚುಕಟ್ಟಾಗಿ ತಿಳಿಯಲು ಉಪಯೋಗವಾಗಿದೆ. ಇನ್ನು ಕೆಲವು ಸರ್ಕಾರದಿಂದ ಅನುದಾನ ಪಡೆದ ಇಲಾಖೆ ಅಥವಾ ಸಂಸ್ಥೆಗೆ ಬಂದಂತಹ ಹಣದ ವಿಚಾರದ ಬಗ್ಗೆ ಮಾಹಿತಿ ಕಲೆಯಾಗಲು ಒಂದು ಉಪಯುಕ್ತ ಹಕ್ಕು ಎಂದರೆ ಅದು ಮಾಹಿತಿ ಹಕ್ಕು.
ಮಾಹಿತಿ ಹಕ್ಕು ಎಂದರೇನು?
ಸರ್ಕಾರದ ಎಲ್ಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಜನರು ಇರುವ ಸ್ವಾತಂತ್ರ್ಯ ಮಾಹಿತಿ ಹಕ್ಕು RTI cat
ಭಾರತದಲ್ಲಿರುವ ಎಲ್ಲಾ ಸರ್ಕಾರಿ ಇಲಾಖೆಗಳು. ಸ್ವಲ್ಪ ಸಂಸ್ಥೆಗಳು. ಸರ್ಕಾರದಿಂದ ಅನುದಾಯ ಪಡೆದಿರುವ ಯಾವುದೇ ಇಲಾಖೆ ಸಂಸ್ಥೆ ಅಥವಾ ಸಂಸ್ಥೆಗಳ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಅಥವಾ ಕಾರ್ಯಗಳು ಸಂಸ್ಥೆಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ತಿಳಿದುಕೊಳ್ಳಲು. ಭಾರತದ ನೆಲದಲ್ಲಿ ಹುಟ್ಟಿರ್ತಕ್ಕಂತ ಪ್ರತಿಯೊಬ್ಬ ಪ್ರಜೆಗೂ ಅಥವಾ ಭಾರತದಲ್ಲಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತ ಅವಕಾಶ ಕಲ್ಪಿಸಿ ಕೊಡುವುದೇ ಮಾಹಿತಿ ಹಕ್ಕು.
ಒಂದೇ ಮಾತಿನಲ್ಲಿ ಹೇಳುವುದಾದರೆ! ಸರ್ಕಾರದ ಎಲ್ಲ ಮಾಹಿತಿಯನ್ನು ಸರಕಾರಕ್ಕೆ ಕೇಳಿ ಪಡೆಯುವ ಹಕ್ಕು ಎಂದರ್ಥ
ಮೊದಲು ಮಾಹಿತಿ ಹಕ್ಕು RTI act ಎಲ್ಲಿ ಹುಟ್ಟಿಕೊಂಡಿತು?
ಮೊಟ್ಟಮೊದಲು ಮಾಹಿತಿ ಹಕ್ಕು 1767 ರಲ್ಲಿ ಸ್ವೀಡನ್ ದೇಶದಲ್ಲಿ ಜಾರಿಗೆ ಬಂದಿದೆ. ಇದನ್ನು ಫ್ರೀಡಂ ಆಫ್ ದ ಪ್ರೆಸ್ ಆಕ್ಟ್ ಇಂದು ಕರೆಯಲಾಗುತ್ತದೆ.
ಫ್ರೀಡಂ ಆಫ್ ದ ಪ್ರೆಸ್ ಆಕ್ಟ್ ನಾ ಉದ್ದೇಶ ಸ್ವೀಡನ್ ನಲ್ಲಿ ವಾಸಿಸುವ ಪ್ರಜೆಗಳಿಗೆ ಆ ದೇಶದ ಸರಕಾರದ ಮಾಹಿತಿ. ಅಥವಾ ದಾಖಲೆಗಳನ್ನು ಸಾರ್ವಜನಿಕರಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿಕವನ್ನು ಉತ್ತೇಜಿಸಲು. ಸ್ವೀಡನ್ ದೇಶವು 1767 ರಲ್ಲಿ ತನ್ನ ದೇಶದೊಳಗೆ ಅಳವಡಿಸಿಕೊಂಡಿದೆ
ಮಾಹಿತಿ ಹಕ್ಕು Rti Act ಪ್ರಮುಖ ಉದ್ದೇಶಗಳು
*ಪ್ರಜೆಗಳಿಗೆ ಮಾಹಿತಿಯ ಪಾರದರ್ಶಕತೆಯನ್ನು ಉತ್ತೇಜಿಸಲು
ಸರ್ಕಾರದ ಕೆಲಸ ಅಥವಾ ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುವುದು
- ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಜನರಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಈ ಕಾಯ್ದೆ ತುಂಬಾ ಸಹಾಯಮಾಡುತ್ತದೆ
- * ಸಾರ್ವಜನಿಕ ಆಡಳಿತವು ಜವಾಬ್ದಾರಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಉಪಯುಕ್ತವಾಗಿದೆ
- * ಸರ್ಕಾರದ ವಿವಿಧ ಯೋಜನೆಗಳು ಮತ್ತು ಆ ಯೋಜನೆಗೆ ಸಂಬಂಧಿಸಿದೆ ಅಂಶಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆಯನ್ನು rti act ಉಪಯೋಗಿಸಬಹುದು
- * ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಜನರು ಉನ್ನತ ಅಧಿಕಾರಿ ಯೊಂದಿಗೆ ನೀರು ಉತ್ತರವನ್ನು ಪಡೆಯಲು ಸಹಾಯವಾಗಿದೆ. ಜೊತೆಗೆ ನಿಜವಾಗಿ ಅಗತ್ಯವಿರುವ ನಿರ್ದಿಷ್ಟ ವ್ಯಕ್ತಿಗೆ ಆ ವ್ಯಕ್ತಿ ಬಯಸಿದ ಮಾಹಿತಿಯನ್ನು ಪಡೆಯಲು ಇದು ಸುಲಭವಾದ ಮತ್ತು ಅವಶ್ಯವಿರುವ ಕಾಯ್ದೆ ಆಗಿದೆ
- * ಸಾರ್ವಜನಿಕರಿಂದ ಮಾಹಿತಿಗಾಗಿ ಬರುವ ವಿನಂತಿ ಅಥವಾ ವಿವರಗಳು ಮತ್ತು ಬೇಡಿಕೆಯ ಪ್ರಮಾಣವನ್ನು ಅಥವಾ ಒತ್ತಡವನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ
ನಮ್ಮ ದೇಶದಲ್ಲಿ ಮಾಹಿತಿಯಕ್ಕೂ ಅಂತ ಹಂತವಾಗಿ ಬಂದ ರೀತಿ
ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಮಾಹಿತಿ ಪ್ರಸ್ತಾಪವೇ ಇರಲಿಲ್ಲ. ಅಂದರೆ ಭಾರತದ ಪ್ರಜೆಗಳು ಸರ್ಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಅವಕಾಶವೇ ಇರಲಿಲ್ಲ
- ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು. ಸಾರ್ವಜನಿಕರಿಗೆ ತೋರಿಸದೆ ಅಥವಾ ಪಾರದರ್ಶಕ ವಾಗಿಲ್ಲದಂತೆ ಅಧಿಕಾರವನ್ನು ಉಳಿಸಿಕೊಂಡು. ಜನರನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುತ್ತಿದ್ದರು.
- * ಇದರಿಂದ ಸರ್ಕಾರದ ಕಾರ್ಯಗಳು ಅಥವಾ ಸರ್ಕಾರದ ನಿರ್ಧಾರಗಳು ಬಹಿರಂಗವಾಗುತ್ತಿರುತ್ತಿಲ್ಲ ಇದರಿಂದ ಭಾರತದ ಪ್ರಜೆಗಳಿಗೆ ಸರ್ಕಾರದ ಮಾಹಿತಿ ಪಡೆಯಲು ಕಷ್ಟವಾಗುತ್ತಿತ್ತು.
ಮಾಹಿತಿ ಹಕ್ಕು rai act ಗಾಗಿ ಪ್ರಾರಂಭಿಕ ಹೋರಾಟಗಳು
*ಮಹಾರಾಷ್ಟ್ರದಲ್ಲಿ ಅರುಣ್ ರಾಯ್ ಎಂಬ ವ್ಯಕ್ತಿ 1990 ರಲ್ಲಿ ಮಾಹಿತಿ ಹಕ್ಕಿಗಾಗಿ ಚಳುವಳಿಯನ್ನು ಆರಂಭಿಸಿದರು.
- ರಾಜಸ್ಥಾನದ ಎಂ ಕೆ ಎಸ್ ಎಸ್ ಅಂದರೆ ಮಾಯಿತುರ್ ಕಿಶನ್ ಶಕ್ತಿ ಸಂಘಟನೆ ಎಂಬ ಹೋರಾಟ ಗುಂಪು ಮಾಹಿತಿ ಹಕ್ಕಿಗಾಗಿ ಚಳುವಳಿಯನ್ನು ಆರಂಭಿಸಿದರು.
- * ಸರ್ಕಾರದ ರಹಸ್ಯಗಳು ಸರ್ಕಾರದ ಅಧಿನಿಯಮಗಳನ್ನು ರದ್ದುಗೊಳಿಸಿ. ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ 5ನೇ ವೇತನ ಆಯೋಗವು ಶಿಫಾರಸ್ಸು ಮಾಡಿತು
- *2022ರಲ್ಲಿ ಫ್ರೀಡಂ ಆಫ್ ದ ಇನ್ಫಾರ್ಮಶನ್ ಆಕ್ಟ್ ( ಎಫ್ ಓ ಐ ) ಎಂಬ ಕೇಂದ್ರ ಕಾನೂನು ಜಾರಿಗೆ ಬಂತು. ದುರದೃಷ್ಟ ವರ್ಷ ಇದು ಪರಿಣಾಮಕಾರಿ ಆಗಲಿಲ್ಲ
ರಾಜ್ಯ ಮಾಹಿತಿ ಹಕ್ಕು ಕಾಯ್ದೆ rti act
ಭಾರತದ ಮಾಹಿತಿ ಹಕ್ಕಿನ ಕಾಯಿದೆ ಸಂಸತ್ ನಲ್ಲಿ ಪಾಸ್ ಆಗೋಕಿಂತ ಮುಂಚಿತವಾಗಿಯೇ. ಭಾರತದ ಕೆಲವು ರಾಜ್ಯಗಳಲ್ಲಿ ತಮ್ಮದೇ ಆದ ಮಾಹಿತಿ ಹಕ್ಕು ರಾಜ್ಯಗಳು ಜಾರಿಗೊಳಿಸಿದವು. ಈ ನಿಟ್ಟಿನಲ್ಲಿ ತಮಿಳು ರಾಜ ಪ್ರಥಮ ರಾಜ್ಯವಾಗಿದೆ
ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂತು
- ತಮಿಳುನಾಡು1997
- * ರಾಜ್ಯಸ್ಥಾನ 2000
- ಕರ್ನಾಟಕ 2000
- ದೆಹಲಿ 2021.
- ಮಹಾರಾಷ್ಟ್ರ 2002
- ಅಸ್ಸಾಂ 2002.
- ಮಧ್ಯ ಪ್ರದೇಶ 2003
- ಜಂಬು ಅಂಡ್ ಕಾಶ್ಮೀರ 2004
- ರಾಜ್ಯಸ್ಥಾನದಲ್ಲಿ ಮಾಹಿತಿ ಹಕ್ಕು ಕಾಯ್ದೆ 2000 ಇಸ್ವಿಯಲ್ಲಿ ಜಾರಿಗೆ ಬಂದಿತ್ತಾದರೂ. ಮಾಹಿತಿ ಹಕ್ಕು ಕಾಯ್ದೆ RTI act ಜಾರಿಗೆ ತರಲು ತಮ್ಮ ಹೋರಾಟ ನಡೆಸಿದ್ದು ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲಿ ಅರುಣ್ ರಾಯ್ ಎಂಬ ವ್ಯಕ್ತಿ 1990 ರಲ್ಲಿ ಮಾಹಿತಿ ಹಕ್ಕಿಗಾಗಿ ಚಳುವಳಿಯನ್ನು ಆರಂಭಿಸಿದರು
2005ರ ಮಾಹಿತಿ ಹಕ್ಕು ಕಾಯ್ದೆ RTI act
ಹೋರಾಟಗಾರರು ಮತ್ತು ಸಾರ್ವಜನಿಕರ ಹೊತ್ತಾಯದ ಮೇರೆಗೆ ಕೇಂದ್ರ ಸರ್ಕಾರ 2005 ಮೇ ತಿಂಗಳಿನಲ್ಲಿ ಮಾಹಿತಿ ಹಕ್ಕುrti ಅಧಿನಿಯಮ ಕ್ಕೆ ಅನುಮೋದನೆ ನೀಡಿತು. ಮಾಹಿತಿ ಹಕ್ಕು ಕಾಯ್ದೆ ಅಕ್ಟೋಬರ್ 1 2005 ರಿಂದ ಜಾರಿಗೆ ಬಂದಿದೆ. ಈ ಹೊಸ ಕಾಯ್ದೆ ಹಳೆಯ ಫ್ರೀಡಂ ಆಫ್ ಇನ್ಫಾರ್ಮಶನ್ ಆಕ್ಟ್ (foi) ಪ್ರತಿರೂಪವಾಗಿದೆ. ಮಾಹಿತಿ ಹಕ್ಕು ಸಂವಿಧಾನದ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹಲವು ಸಮಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಎತ್ತಿ ಹಿಡಿದಿದೆ. ಕಾಯ್ದೆ ಸಂವಿಧಾನ ದ 19 1 (a) ಅಡಿಯಲ್ಲಿ ಬರುವಂತಹ ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. ಸ್ವಾತಂತ್ರ್ಯದ ಹಕ್ಕು. ಪತ್ರಿಕ ಸ್ವಾತಂತ್ರ್ಯದ ಹಕ್ಕು ಜೊತೆಗೆ ಮಾಹಿತಿ ಹಕ್ಕು RTI act ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತಲೇ ಬಂದಿದೆ
- ಭಾರತದ ರಾಷ್ಟ್ರಪತಿಗಳು ಭಾರತದ ಮುಖ್ಯ ಮಾಹಿತಿ ಆಯುಕ್ತರನ್ನು ನೇಮಿಸುತ್ತಾರೆ. ರಾಜ್ಯ ಮಾಹಿತಿ ಆಯುಕ್ತರನ್ನು ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಜ್ಯ ಮಾಹಿತಿ ಆಯುಕ್ತರ ಕಾಲಾವಧಿ ಐದು ವರ್ಷಗಳು
- * ಭಾರತದ ಮುಖ್ಯ ಮಾಹಿತಿ ಆಯುಕ್ತರು ಭಾರತದ ಮುಖ್ಯ ಚುನಾವಣಾ ಆಯುಕ್ತರ ಸ್ಥಾನಮಾನವನ್ನು ಹೊಂದಿದ್ದಾರೆ. ಭಾರತದ ಮುಖ್ಯ ಮಾಹಿತಿ ಆಯುಕ್ತರನ್ನು ಪ್ರಧಾನ ಮಂತ್ರಿ. ಲೋಕಸಭೆಯ ವಿರೋಧ ಪಕ್ಷದ ನಾಯಕ. ಮತ್ತು ಪ್ರಧಾನಿಯಿಂದ ನಾಮಕರಣಗೊಂಡ ಉಪ ಮಂತ್ರಿಯನ್ನು ಒಳಗೊಂಡ. ಒಂದು ಸಮಿತಿಯು ಮುಖ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುತ್ತಾರೆ ಅಥವಾ ಆಯ್ಕೆ ಮಾಡುತ್ತಾರೆ
- * ಭಾರತದ ಮುಖ್ಯ ಮಾಹಿತಿ ಆಯುಕ್ತರು ಮತ್ತು ರಾಜ್ಯದ ಮಾಹಿತಿ ಆಯುಕ್ತರು ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ವಾರ್ಷಿಕ ವರದಿಯನ್ನು ಪ್ರಕಟಿಸುತ್ತಾರೆ. ಈ ವಾರ್ಷಿಕ ವರದಿಯನ್ನು. ಭಾರತದ ಮುಖ್ಯ ಮಾಹಿತಿ ಆಯುಕ್ತರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಭಾರತದ ಮುಖ್ಯ ಮಾಹಿತಿ ಆಯುಕ್ತರು ರಾಜ್ಯದ ಶಾಸನ ಸಭೆಯಲ್ಲಿ ಮಂಡಿಸಲಾಗುತ್ತದೆ
- ಮಾಹಿತಿ ಹಕ್ಕಿನ ವಿನಂತಿ ಯೊಂದಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತಿಯೊಂದು ಇಲಾಖೆಯಲ್ಲಿಯೂ ಒಬ್ಬ ಮಾಹಿತಿ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಮಾಹಿತಿ ಅಧಿಕಾರಿಯ ಸಾರ್ವಜನಿಕರು ಬಯಸಿದ ಮಾಹಿತಿಯ ಅರ್ಜಿಯನ್ನು. ಅವರು ಸಲ್ಲಿಸಿದ 30 ದಿನಗಳ ಒಳಗೆ ಮಾಹಿತಿಯನ್ನು ಒದಗಿಸಬೇಕು. ಆದರೆ ಒಬ್ಬ ವ್ಯಕ್ತಿಯ ಜೀವ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಎಂಟು ಗಂಟೆಗಳ ಗಡವು ನೀಡುತ್ತದೆ.
- * ಬಡತನ ರೇಖೆಗಿಂತಲೂ ಕೆಳಗೆ ವಾಸಿಸುವ ಜನರನ್ನು ಉಚಿತವಾಗಿ ಮಾಹಿತಿ ನೀಡಲಾಗುವುದು.
- * ಸರ್ಕಾರದ ಸಂಸ್ಥೆಗಳು ಸಿಬ್ಬಂದಿಗೆ ನೀಡಲಾಗುವ ಸಂಬಳ ಮತ್ತು ಮುಂಗಡಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಕಟಿಸಬೇಕು
ಅಧಿಕಾರಿಯು ಮಾಹಿತಿ ನೀಡಲು ವಿಳಂಬ ಮಾಡಿದರೆ ಆ ಅಧಿಕಾರಿಗೆ ದಿನಕ್ಕೆ ಕನಿಷ್ಠ 25 ಗರಿಷ್ಠ 25,000 ವರೆಗೆ ದಂಡ ವಿಧಿಸುವ ಹಕ್ಕು ಮಾಹಿತಿ ಆಯೋಗಕ್ಕೆ ಇದೆ.
ವಿಳಂಬ ಎಂದರೆ ಮಾಹಿತಿ ನೀಡಲು ಇರುವ 30 ದಿನಗಳ ನಂತರ ತೆಗೆದುಕೊಳ್ಳುವ ಕಾಲಾ.
- ಅಧಿಕಾರಿಯೂ ಮಾಹಿತಿ ನೀಡಲು ನಿರಕರಿಸಿದರೇ.
- ಮನವಿ ಸಲ್ಲಿಸಲು ಅನುಸರಿಸಬೇಕಾದ ನಿಯಮ ಮೊದಲು ಸಾರ್ವಜನಿಕ ಮಾಹಿತಿ ಅಧಿಕಾರಿಯ ಮೇಲಧಿಕಾರಿಗೆ ಅರ್ಜಿ ಸಲ್ಲಿಸಬೇಕು ನಂತರ ಇತಿ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು ಆನಂತರ ಹುಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕು
- * ಗುಪ್ತಚರ ಇಲಾಖೆಗೆ. *Raw.
- *ಭದ್ರತಾ ಪಡೆ.
- *ಸಿ ಐ ಎಸ್ ಎಫ್.
- ರಾಷ್ಟ್ರೀಯ ಭದ್ರತಾಳ
- ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ
ಮಾಹಿತಿ ಹಕ್ಕು ಕೆಲವು ವಿಷಗಳಿಗೆ ಮಾಹಿತಿಯನ್ನು ಬಹಿರಂಗಪಡಿಸಿದಂತೆ ವಿನಾಯಿತಿ ನೀಡಲಾಗಿದೆ
- ಭಾರತದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ಮಾಹಿತಿಗೆ
- * ಸಚಿವ ಸಂಪುಟದ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಗಳಿಗೆ
- * ಸಂಸತ್ತಿನ ಅಥವಾ ರಾಜ್ಯ ಶಾಸನಸಭೆಗೆ ಧಕ್ಕೆ ತರುವಂತಹ ಮಾಹಿತಿ
- * ಕೇಂದ್ರ ಹಾಗೂ ರಾಜ್ಯಗಳಿಗೆ ದಕ್ಕೆ ತರುವಂತಹ ಮಾಹಿತಿಗಳಿಗೆ
- * ಸಾರ್ವಜನಿಕರ ಭದ್ರತೆ ಮತ್ತು ಸೃಷ್ಟಿಗೆ ಧಕ್ಕೆ ಉಂಟಾಗುವ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://youtu.be/VdszTtzKgcI