ಕೇಂದ್ರ ಸಚಿವ ಮಣಿ ಶಂಕರ್ ಅಯ್ಯರ್ ಹೇಳಿಕೆ
ಪಾಕಿಸ್ತಾನ ಅಣುಬಾಂಬ್ ಹೊಂದಿದೆ ಅಲ್ಲಿ ಆಡಳಿತದಲ್ಲಿ ಯಾರಾದರೂ ತಲೆ ಕೆಟ್ಟ ವ್ಯಕ್ತಿ ಅಧಿಕಾರಕ್ಕೆ ಬಂದರೆ ಭಾರತದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಬಹುದು ಆಗಿನ ಸ್ಥಿತಿ ಊಹಿಸಿಕೊಳ್ಳಿ ಪಾಕಿಸ್ತಾನದ ಜತೆ ಮಾತುಕತೆ ನಡೆಸಲು ಈಗಿನ ಪ್ರಧಾನಿ ನರೇಂದ್ರ ಮೋದಿ ಏಕೆ ನಿರಾಕರಿಸುತ್ತಿದ್ದಾರೆ ಎಂಬುವುದೇ ನನಗೆ ಗೊತ್ತಾಗುತ್ತಿಲ್ಲ ಪಾಕಿಸ್ತಾನದ ಜೊತೆ ಮಾತುಕತೆ ಆರಂಭಿಸಬೇಕು ಮಾತುಕತೆ ನಿಂತಿರುವುದರಿಂದ ಉದ್ವಿಗ್ನತೆ ಇನ್ನಷ್ಟು ಹೆಚ್ಚಿದೆ ಇದರಿಂದ ಏನು ಸಾಧಿಸಿದಂತಾಯಿತು.
ಎನ್‌ಡಿಎ ಒಕ್ಕೂಟಕ್ಕೆ ಹೊಸ ಅಸ್ತ ಒದಗಿಸಿದ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿಕೆ

ಇದು ಮೊದಲ ಬಾರಿಯ ಏನಲ್ಲ
ಮಣಿಶಂಕರ್ ಅಯ್ಯರ್ ವಿವದಾತ್ಮಕ ಹೇಳಿಕೆ ನೀಡಿದ್ದು ಇದೆ ಮೊದಲಲ್ಲ.
2024ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಲಾಹೋರ್ ಗೆ ಭೇಟಿ ನೀಡಿದಾಗ ಅಲ್ ಹಮ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅಯ್ಯರ್ ಧಾರ್ಮಿಕ ಮೂಲಭೂತದ ವಿಷಯದಲ್ಲಿ ಪಾಕಿಸ್ತಾನವನ್ನು ನಕಲು ಮಾಡುತ್ತಿರುವ ಭಾರತ ಹಿಂದೂ ರಾಷ್ಟ್ರವಾಗಲು ಬಯಸುತ್ತಿದೆ ಎಂದಿದ್ದರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದರು. ಪಾಕಿಸ್ತಾನ ಪರಮಾಣು ಬಾಂಬ್ ಗಳನ್ನು ಹೊಂದಿದ್ದು.ಆ ಬಗೆ ಭಾರತ ಎಚ್ಚರದಿಂದ ಇರಬೇಕು.ಭಾರತದ ಆವೇಶದ ಮಾತುಗಳನ್ನು ಕೇಳಿ ಸುಮ್ಮನಿರಲು ಪಾಕಿಸ್ತಾನವೇನೂ ಬಳೆ ಧರಿಸಿಕೊಂಡು ಕೂತಿಲ್ಲ ಎಂದು ವಿವಾದ ಹುಟ್ಟು ಹಾಕಿದ್ದರು.
ಈ ಹೇಳಿಕೆ ಯಾವಾಗ ಕೊಟ್ಟಿದ್ದು
ಚಿಲ್ ಪಿಲ್ ಎಂಬ ಯುಟ್ಯೂಬ್ ವಾಹಿನಿಗೆ ಏಪ್ರಿಲ್ 15ರಂದು ಸಂದರ್ಶನ ನೀಡುವಾಗ ಮಣಿ ಶಂಕರ್ ಅಯ್ಯರ್ ಈ ಮಾತುಗಳನ್ನು ಹೇಳಿದ್ದು. ಮಣಿ ಶಂಕರ್ ಅಯ್ಯರ್ ಹೇಳಿಕೆ ವಿರೋಧ ಹೆಚ್ಚುತ್ತಿದ್ದಂತೆ ಕಾಂಗ್ರೆಸ್ ಆತಂರಕಾಯ್ದುಕೊಂಡಿದೆ. ಇದು ಹಳೆಯ ವಿಡಿಯೋ ಆ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಒಂದಿಲ್ಲ ಒಂದು ವಿವಾದ ಮೇಲೆ ಎಳೆದುಕೊಳ್ಳುತ್ತಿದೆ
ಸಾಗರೋತ್ತರ ಕಾಂಗ್ರೆಸ್ ವಿಭಾಗ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡಾ ಪಶ್ಚಿಮ ಭಾರತೀಯರನ್ನು ಚೀನಿಯರಿಗೆ ದಕ್ಷಿಣ ಭಾರತೀಯರನ್ನು ಆಫ್ರಿಕನರಿಗೆ ಹೋಲಿಸುವ ಮೂಲಕ ವರ್ಣಭೇದದ ಕಿಡಿ ಹತ್ತಿಸಿದ್ದರು
ಪಾಕಿಸ್ತಾನದ ಮಾಜಿ ಸಚಿವರು ರಾಹುಲ್ ಗಾಂಧಿಯನ್ನು ಹೊಗಳಿದ್ದು ವಿವಾದದ ಸ್ವರೂಪ ಪಡೆದು ರಾಹುಲ್ ಗಾಂಧಿ ಪ್ರಧಾನಿ ಆದರೆ ಪಾಕಿಸ್ತಾನೀಯರು ಸಂಭ್ರಮಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿಯು ಆಗಿದೆ ಈಗ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ಭಾರತವು ಪಾಕಿಸ್ತಾನಕ್ಕೆ ಮರ್ಯಾದೆ ನೀಡಬೇಕು ಎನ್ನುವ ಮೂಲಕ ವಿವಾದಕ್ಕೆ ತುಪ್ಪ ಸುರಿಸಿದ್ದಾರೆ.