ಗ್ರೂಪ್ ಸಿ 373 + 113 =486 ಹುದ್ದೆಗಳ ವಿವರ

ವಿವಿಧ ಗ್ರೂಪ್ C -373 ( RPC) + 113 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಪ್ರತ್ಯೇಕವಾಗಿ ಅಧಿಸೂಚನೆಯನ್ನು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಈ ಕೆಳಕಂಡಂತೆ ಅರ್ಜಿ ಸಲ್ಲಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ
ಅರ್ಜಿ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 29-04-2024
ಅರ್ಜಿ ಸಲ್ಲಿಸಲು ಮತ್ತು ಸುಲ್ಕ ಪಾವತಿಸಲು ಕೊನೆಯ ದಿನಾಂಕ 28 -05-2024
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಆಯೋಗದ ದಿನಾಂಕ 15.03.2024 ಅಧಿಸೂಚನೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಹೋಗಿ ನೋಡಬಹುದು
- ಗ್ರೂಪ್ ಬಿ 277 ಹುದ್ದೆಗಳ ವಿವರ
ಗ್ರೂಪ್ ಬಿ ವೃಂದದ 277 (RPC) ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಹವಾನಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಸದರಿ ಅಧಿಸೂಚನೆಯಲ್ಲಿನ ಜಲಸಂಪನ್ಮೂಲ ಇಲಾಖೆಯಲ್ಲಿ (ಸಿವಿಲ್)-90 ಮತ್ತು ಸಹಾಯಕ ಇಂಜಿನಿಯರ್ (ಮೆಕಾನಿಕಲ್ )-10 ಹುದ್ದೆಗಳಿಗೆ ಇಲಾಖೆಯ ಪ್ರಸ್ತಾಪನೆಯಂತೆ ನಿಗದಿಪಡಿಸಲಾಗಿದ್ದ ವಿದ್ಯಾರ್ಹತ್ಯೆಯ ಕೋರ್ಸ್ ಗಳಲ್ಲಿ ಕೆಲವು ಬಿಇ ಪದವಿಗಳನ್ನು ಮಾತ್ರ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಪ್ರಸ್ತುತ ತಿದ್ದುಪಡಿ
ಪ್ರಸ್ತುತ ಸರ್ಕಾರದ ಪತ್ರ ದಿನಾಂಕ 13-05.2024ರಲ್ಲಿ ಸದರಿ ಹುದ್ದೆಗಳಿಗೆ ಬಿ ಟೆಕ್ ಪದವಿ ಎನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೋರಲಾಗಿರುತ್ತದೆ
ಈ ಹಿನ್ನಲೆಯಲ್ಲಿ ಮೇಲ್ಕಂಡ ಅಧಿಸೂಚನೆಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್(ಸಿವಿಲ್ )( ವಿಭಾಗ -1) -90 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) ( ವಿಭಾಗ -1)-10 ಹುದ್ದೆಗಳಿಗೆ ನಿಗದಿಸಲಾಗಿದ ವಿದ್ಯಾರ್ಹತೆಯ ಬಿ ಟೆಕ್ ಪದವಿಯನ್ನು ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡುವ ದೃಷ್ಟಿಯಿಂದ ಮೇಲ್ಕಂಡ ಅಧಿಸೂಚನೆಯಲ್ಲಿನ ವಿವಿಧ ಇಲಾಖೆಗಳ ಎಲ್ಲಾ ಗ್ರೂಪ್ “ಬಿ” ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಸಿರುವ ಕೊನೆಯ ದಿನಾಂಕವನ್ನು. 24-05.2024ರ ವರೆಗೆ ವಿಸ್ತರಿಸಲಾಗಿದೆ ಉಳಿದಂತೆ ದಿನಾಂಕ 13 -3-2024ರ ಅಧಿಸೂಚನೆಯಲ್ಲಿನ ಇತರೆ ಶರತ್ತು ಅಥವಾ ಅಧಿಸೂಚನೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.